New Ration Card Application : ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿ ಪ್ರಕ್ರಿಯೆ ಪ್ರಾರಂಭ.! ಕೊನೆಯ ದಿನಾಂಕ ಯಾವಾಗ?

ನಮಸ್ಕಾರ ಸ್ನೇಹಿತರೆ, ನೀವು ನಿಮ್ಮ ರೇಷನ್ ಕಾರ್ಡ್‌ನಲ್ಲಿ ಕುಟುಂಬದ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು, ವಿಳಾಸ ಬದಲಾಯಿಸಲು, ಅಥವಾ ನ್ಯಾಯಬೆಲೆ ಅಂಗಡಿಯ ಹೆಸರನ್ನು ಬದಲಾಯಿಸಲು ಬಯಸುತ್ತಿದ್ದರೆ, ಈ ಅವಕಾಶವನ್ನು ತಪ್ಪದೇ ಬಳಸಿಕೊಳ್ಳಿ. ರಾಜ್ಯ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಅರ್ಜಿಗಳನ್ನು ಪ್ರಾರಂಭಿಸಿದ್ದು, ಈ ಲೇಖನದಲ್ಲಿ ನೀವು ಈ ಸಂಬಂಧಿತ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಬಹುದು.ಹಾಗೆ ಅರ್ಜಿ ಸಲ್ಲಿಸುವ ಮಾಹಿತಿ ತಿಳಿಸಲಾಗಿದೆ ಕೊನೆಯವರೆಗೂ ಲೇಖನವನ್ನು ಓದಿ ಮಾಹಿತಿ ತಿಳಿದುಕೊಳ್ಳಿ .

New Ration Card Application Karnataka
New Ration Card Application Karnataka

ರೇಷನ್ ಕಾರ್ಡ್ ತಿದ್ದುಪಡಿ (Ration Card Amendment):

ನಿಮ್ಮ ರೇಷನ್ ಕಾರ್ಡ್‌ನಲ್ಲಿ ಯಾವುದೇ ಬದಲಾವಣೆ ಅಥವಾ ತಿದ್ದುಪಡಿ ಮಾಡಲು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ದಿನಾಂಕ 31 ಜನವರಿ 2025 ರೊಳಗಾಗಿ, ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ, ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ಅರ್ಜಿ ಸಲ್ಲಿಸಬಹುದು.ಹಾಗೆ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಂಡು ಸರ್ಕಾರದ ಸದುಪಯೋಗ ಪಡೆದುಕೊಳ್ಳಿ .

ತಿದ್ದುಪಡಿ ಮಾಡಬಹುದಾದ ವಿಷಯಗಳು :

  1. ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡಿ .
  2. ರೇಷನ್ ಕಾರ್ಡ್ ವಿಳಾಸ ಬದಲಾವಣೆ ಮಾಡಿಕೊಳ್ಳಿ .
  3. ಕುಟುಂಬದ ಮುಖ್ಯಸ್ಥರ ಬದಲಾವಣೆ ಮಾಡಬಹುದು .
  4. eKYC ಪ್ರಕ್ರಿಯೆ ಮಾಡಿ .
  5. ಸದಸ್ಯರನ್ನು ರೇಷನ್ ಕಾರ್ಡ್‌ನಿಂದ ತೆಗೆದುಹಾಕುವುದು.
  6. ನ್ಯಾಯಬೆಲೆ ಅಂಗಡಿ ಬದಲಾವಣೆ ಮಾಡಿಕೊಳ್ಳಿ.
  7. ಆಧಾರ್ ಕಾರ್ಡ್ ಲಿಂಕ್ ಮಾಡುವುದು.

ಹೊಸ ರೇಷನ್ ಕಾರ್ಡ್ ಅರ್ಜಿ (New Ration Card Application):

ಪ್ರಸ್ತುತ, ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಅವಕಾಶ ನೀಡಲಾಗುತ್ತಿದೆ. ಹೀಗಾಗಿ, ನೀವು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬಯಸಿದರೆ, ನಿಮ್ಮ ಹತ್ತಿರದ ಗ್ರಾಮ್ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ.

ಪ್ರಮುಖ ಮಾಹಿತಿ ತಿಳಿದುಕೊಳ್ಳಿ :

  • ಹೊಸ ಅರ್ಜಿ ಪ್ರಕ್ರಿಯೆ ಫೆಬ್ರುವರಿ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ.
  • ಈ ಸಂಬಂಧ ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆ ಆಗಬೇಕಾಗಿದೆ.
  • ಅಧಿಕೃತ ಜಾಲತಾಣ : ಲಿಂಕ್ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

  1. ಜಾತಿ ಪ್ರಮಾಣ ಪತ್ರ
  2. ಆದಾಯ ಪ್ರಮಾಣ ಪತ್ರ
  3. ಎಲ್ಲಾ ಕುಟುಂಬದ ಸದಸ್ಯರ ಆಧಾರ್ ಕಾರ್ಡ್
  4. ಮೊಬೈಲ್ ನಂಬರ್
  5. ಆರು ವರ್ಷದೊಳಗಿನ ಮಕ್ಕಳ ಜನನ ಪ್ರಮಾಣ ಪತ್ರ
  6. ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋಗಳು
  7. ಇತರ ದಾಖಲೆಗಳು (ಅಗತ್ಯವಿದ್ದರೆ).

ಪ್ರಮುಖ ಸೂಚನೆ:

ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಯೋಜನೆಗಳು, ಪ್ರಮುಖ ಸುದ್ದಿಗಳು, ಹಾಗೂ ಪ್ರಚಲಿತ ವಿಷಯಗಳ ಕುರಿತಂತೆ ದಿನನಿತ್ಯದ ಅಪ್‌ಡೇಟ್ಸ್ ಪಡೆಯಲು, ವಾಟ್ಸಾಪ್ ಅಥವಾ ಟೆಲಿಗ್ರಾಂ ಚಾನಲ್‌ಗಳಿಗೆ ಸೇರಿಕೊಳ್ಳಿ.

Leave a Reply

Your email address will not be published. Required fields are marked *