ಉಚಿತ ಹೊಲಿಗೆ ಯಂತ್ರ ಯೋಜನೆ 2025: ಅರ್ಹರಿಗೆ ಆನ್‌ಲೈನ್‌ ಅರ್ಜಿ ಆಹ್ವಾನ

ನಮಸ್ಕಾರ ಸೇಹಿತರೇ, ನೀವು ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆಯಲು ಆಸಕ್ತಿಯಿದ್ದೀರಾ? ಈ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಹೇಗೆ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಯಾರು ಈ ಯೋಜನೆಗೆ ಅರ್ಹರಾಗಿರುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ಈ ಲೇಖನ ರಚಿಸಲಾಗಿದೆ.

Free Sewing Machine Plan 2025
Free Sewing Machine Plan 2025

2024-25 ನೇ ಸಾಲಿನಲ್ಲಿ, ಗ್ರಾಮೀಣ ಕೈಗಾರಿಕೆ ಇಲಾಖೆ ಮತ್ತು ಜಿಲ್ಲಾ ಪಂಚಾಯತ ಕೈಗಾರಿಕಾ ವಿಭಾಗದ ಮೂಲಕ ಅನುಮೋದಿತ ಕ್ರಿಯಾ ಯೋಜನೆಯ ಅಡಿಯಲ್ಲಿ, ವಿವಿಧ ವೈಯಕ್ತಿಕ ಫಲಾನುಭವಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ, ಅರ್ಹ ಗ್ರಾಮೀಣ ಪ್ರದೇಶದ ಫಲಾನುಭವಿಗಳನ್ನು ಆಯ್ಕೆ ಮಾಡಿ, ಅವರು ಇದರಿಂದ ಲಾಭ ಪಡೆಯಲು ಆನ್‌ಲೈನ್‌ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಉಚಿತ ಹೊಲಿಗೆ ಯಂತ್ರ ಯೋಜನೆ ಮತ್ತು ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ವಿತರಣೆ ಮಾಡುವುದಕ್ಕಾಗಿ ಸರ್ಕಾರವು ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

  1. ಪಡಿತರ ಚೀಟಿ (Ration Card)
  2. ಆಧಾರ ಕಾರ್ಡ್ (Aadhar Card)
  3. ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ (Recent Photograph)
  4. ಜನ್ಮ ದಿನಾಂಕದ ದಾಖಲೆ (Birth Date Proof – School Records/Transfer Certificate/10th Class Marks Card)
  5. ಜಾತಿ ಮತ್ತು ಆದಾಯು ಪ್ರಮಾಣ ಪತ್ರ (Caste & Income Certificate)
  6. ಹೊಲಿಗೆ ತರಬೇತಿ ಪ್ರಮಾಣ ಪತ್ರ (Sewing Training Certificate)
  7. ಗ್ರಾ.ಪಂ ಉದ್ಯೋಗ ದೃಢೀಕರಣ ಪತ್ರ (Gram Panchayat Employment Certificate)
  8. ಮತದಾರರ ಗುರುತಿನ ಚೀಟಿ (Voter ID Card)

ಅರ್ಹತಾ ಪ್ರಮಾಣಪತ್ರಗಳು:

  1. ಅರ್ಹ ಅಭ್ಯರ್ಥಿಯು ಗ್ರಾಮೀಣ ಪ್ರದೇಶದಿಂದ ಆಗಿರಬೇಕು.
  2. ಪ್ರತಿಯೊಬ್ಬ ಕುಟುಂಬಕ್ಕೆ ಒಂದು ಅರ್ಜಿ ಮಾತ್ರ ಸಲ್ಲಿಸಬಹುದು.
  3. ಈ ಯೋಜನೆಗೆ ಮಹಿಳಾ ಅಭ್ಯರ್ಥಿಗಳೇ ಅರ್ಜಿ ಸಲ್ಲಿಸಬಹುದು.
  4. ಯಾವುದೇ ಸರ್ಕಾರಿ ಯೋಜನೆಯಡಿ ಈಗಾಗಲೇ ಹೊಲಿಗೆ ಯಂತ್ರ ಪಡೆದ ಫಲಾನುಭವಿಗಳು ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಲ್ಲ.
  5. ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಲ್ಲ.

ಅರ್ಜಿ ಸಲ್ಲಿಸಲು ವಿಧಾನ:

  • ಆನ್‌ಲೈನ್ ವೆಬ್‌ಸೈಟ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಅಪ್ಲೋಡ್ ಮಾಡಿ.
  • ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಿ.

ವಿದ್ಯಾರ್ಹತೆ:

  • ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. (ಹೆಚ್ಚು ವಿದ್ಯಾರ್ಹತೆ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ)
  • ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ವಿತರಣೆಗಾಗಿ ಯಾವುದೇ ವಿದ್ಯಾರ್ಹತೆ ಅವಶ್ಯಕವಿಲ್ಲ.

ಅರ್ಜಿ ಸಲ್ಲಿಸುವ ದಿನಾಂಕ:

  1. ಬಳ್ಳಾರಿ ಜಿಲ್ಲೆ:
    • ಅರ್ಜಿ ಆರಂಭ ದಿನಾಂಕ: 17-01-2025
    • ಕೊನೆಯ ದಿನಾಂಕ: 16-02-2025
  2. ವಿಜಯನಗರ ಜಿಲ್ಲೆ:
    • ಅರ್ಜಿ ಆರಂಭ ದಿನಾಂಕ: 17-01-2025
    • ಕೊನೆಯ ದಿನಾಂಕ: 16-02-2025
  3. ಕೋಲಾರ ಜಿಲ್ಲೆ:
    • ಅರ್ಜಿ ಆರಂಭ ದಿನಾಂಕ: 14-11-2024
    • ಕೊನೆಯ ದಿನಾಂಕ: 31-01-2025
  4. ಬಾಗಲಕೋಟೆ ಜಿಲ್ಲೆ:
    • ಅರ್ಜಿ ಆರಂಭ ದಿನಾಂಕ: 25-10-2024
    • ಕೊನೆಯ ದಿನಾಂಕ: 27-01-2025

ಆನ್ಲೈನ್ ಅರ್ಜಿ ಲಿಂಕ್‌ಗಳು:

  1. ಬಳ್ಳಾರಿ ಜಿಲ್ಲೆ:
    • ಪ್ರಕಟಣೆ ಡೌನ್‌ಲೋಡ್: [Download Link]
    • ಆನ್‌ಲೈನ್ ಅರ್ಜಿ: [Apply Now]
    • ಅಧಿಕೃತ ವೆಬ್‌ಸೈಟ್: ballari.nic.in
  2. ವಿಜಯನಗರ ಜಿಲ್ಲೆ:
    • ಪ್ರಕಟಣೆ ಡೌನ್‌ಲೋಡ್: [Download Link]
    • ಆನ್‌ಲೈನ್ ಅರ್ಜಿ: [Apply Now]
    • ಅಧಿಕೃತ ವೆಬ್‌ಸೈಟ್: vijayanagara.nic.in
  3. ಕೋಲಾರ ಜಿಲ್ಲೆ:
    • ಪ್ರಕಟಣೆ ಡೌನ್‌ಲೋಡ್: [Download Link]
    • ಆನ್‌ಲೈನ್ ಅರ್ಜಿ: [Apply Now]
    • ಟೂಲ್ ಕಿಟ್ ಆನ್‌ಲೈನ್ ಅರ್ಜಿ: [Apply Now]
    • ಅಧಿಕೃತ ವೆಬ್‌ಸೈಟ್: kolar.nic.in
  4. ಬಾಗಲಕೋಟೆ ಜಿಲ್ಲೆ:
    • ಆನ್‌ಲೈನ್ ಅರ್ಜಿ: [Apply Now]
    • ಟೂಲ್ ಕಿಟ್ ಆನ್‌ಲೈನ್ ಅರ್ಜಿ: [Apply Now]
    • ಅಧಿಕೃತ ವೆಬ್‌ಸೈಟ್: bagalkot.nic.in

ಇತರೆ ವಿಷಯಗಳು :

Leave a Reply

Your email address will not be published. Required fields are marked *